ಇಡೀ ದೇಶವನ್ನು ಆಕ್ರಮಿಸುವ ಮೂಲಕ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ತನ್ನ ಅಧಿಕಾರ ಘೋಷಣೆ ಮಾಡಿದೆ. ದೇಶವನ್ನು ತನ್ನ ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತಾಲಿಬಾನ್ ತಾನು ಆಕ್ರಮಿಸಿಕೊಂಡ ಪ್ರದೇಶಗಳ ಗಡಿ ಬಂದ್ ಮಾಡುತ್ತಾ ಬಂದಿತ್ತು. ಹೀಗಾಗಿ ಬೇರೆ ದೇಶಗಳೊಂದಿಗಿನ ಗಡಿ ಮಾರ್ಗಗಳು ಮುಚ್ಚಿ ಹೋಗಿವೆ. ಸದ್ಯ ದೇಶದಿಂದ ಹೊರ ಹೋಗಲು ಕಾಬೂಲ್ ವಿಮಾನ ನಿಲ್ದಾಣವನ್ನು ಮಾತ್ರ ತೆರೆದಿಟ್ಟಿದೆ. ದೇಶದಲ್ಲಿ ಉಗ್ರಗಾಮಿ ಸಂಘಟನೆಯೊಂದರ ಆಡಳಿತದ ಚುಕ್ಕಾಣಿ