ಮುಂಬೈ, ನಾಸಿಕ್: ‘ಕೇಂದ್ರ ಸಚಿವ ನಾರಾಯಣ ರಾಣೆ ಅವರ ಅಹಂ ಮತ್ತು ಪ್ರತೀಕಾರ ತೀರಿಸಿಕೊಳ್ಳುವ ಮನೋಭಾವದಿಂದಾಗಿ ಬಿಜೆಪಿಯು ಹಿನ್ನೆಡೆ ಅನುಭವಿಸುವಂತಾಗಿದ್ದು, ಕೇಂದ್ರದ ಸಾಧನೆ ಪ್ರಚಾರದ ‘ಜನ ಆಶೀರ್ವಾದ ಯಾತ್ರೆ’ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ನಿರ್ದೇಶನಗಳನ್ನು ರಾಣೆ ಪಾಲಿಸುತ್ತಿಲ್ಲ’ ಎಂದು ಶಿವಸೇನಾದ ಸಂಸದ ಸಂಜಯ್ ರಾವುತ್ ಶನಿವಾರ ಆರೋಪಿಸಿದ್ದಾರೆ.