ದಾವಣಗೆರೆ: ನಗರದಲ್ಲಿ ಹಲವೆಡೆ ಒಳ ಚರಂಡಿ, ಜಲಸಿರಿ ಕಾಮಗಾರಿ, ನೀರಿನ ಪೈಪ್‌ಲೈನ್, ವಿದ್ಯುತ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳಿಗಾಗಿ ಪದೇ ಪದೇ ನೆಲ ಅಗೆಯುವುದು, ಮುಚ್ಚುವುದು ಸಾಮಾನ್ಯವಾಗಿದೆ. ಹಲವು ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದೆ. ಇದು ಮುಗಿಯುವುದು ಯಾವಾಗ ಎಂಬುದು ಜನರ ಪ್ರಶ್ನೆ.