ಕಾಬೂಲ್: ತಾಲಿಬಾನ್ ಅಫ್ಗಾನಿಸ್ತಾನದಲ್ಲಿ ಸರ್ಕಾರದ ಪ್ರಮುಖ ಕಟ್ಟಡಗಳನ್ನು ತನ್ನ ವಶಕ್ಕೆ ಪಡೆದಿದೆ. ಅಫ್ಗಾನಿಸ್ತಾನದ ಈಶಾನ್ಯ ಭಾಗದಲ್ಲಿರುವ ಕುಂದುಜ್ನಲ್ಲಿ ತಾಲಿಬಾನ್ ಉಗ್ರರು ಆಕ್ರಮಣ ಮುಂದುವರಿಸಿದ್ದು, ಹಲವು ಕಟ್ಟಡಗಳನ್ನು ವಶಕ್ಕೆ ಪಡೆದಿದ್ದಾರೆ. ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಇರಾನ್ ಗಡಿಗೆ ಸಮೀಪದಲ್ಲಿರುವ ಝರಾಂಜ್ ಪ್ರಾಂತ್ಯವನ್ನು ತಾಲಿಬಾನ್ ಉಗ್ರರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.