ಉತ್ತರ ಭಾರತದ ಝಾನ್ಸಿ ರಾಣಿ ಲಕ್ಷ್ಮಿಬಾಯಿಗಿಂತ 33 ವರ್ಷಗಳ ಮೊದಲೇ ದೈತ್ಯ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಕಿತ್ತೂರು ರಾಣಿ ಚನ್ನಮ್ಮ. ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿ ಬಂದಾಗ ಪುಟ್ಟ ಸಂಸ್ಥಾನವಾಗಿದ್ದರೂ ಅವರ ವಿರುದ್ಧದ ಕಾದಾಟದಲ್ಲಿ ಗೆದ್ದು, ಅನಂತರ ಸೋತವರು ಕಿತ್ತೂರಿನ ವೀರ ಸೈನಿಕರು.