Late former Union Minister P Rangarajan Kumaramangalams wife found murdered in Delhi
ದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಆರ್. ಕುಮಾರಮಂಗಲಂ ಪತ್ನಿಯ ಹತ್ಯೆ
ಪ್ರಜಾವಾಣಿ ವೆಬ್ ಡೆಸ್ಕ್ Updated:
07 ಜುಲೈ 2021, 11:11 IST
ಅಕ್ಷರ ಗಾತ್ರ :ಆ |ಆ |ಆ
ನವದೆಹಲಿ: ಕೇಂದ್ರದ ಮಾಜಿ ಸಚಿವ, ದಿವಂಗತ ಪಿ.ಆರ್. ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ (67) ಅವರನ್ನು ಮಂಗಳವಾರ ರಾತ್ರಿ ದೆಹಲಿಯ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆಯಲ್ಲಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ವಸಂತ್ ವಿಹಾರದಲ್ಲಿ ಕಿಟ್ಟಿ ಕುಮಾರಮಂಗಲಂ ಒಬ್ಬಂಟಿಯಾಗಿದ್ದಾಗ ಅವರಿಗೆ ಕೆಲಸ ಮಾಡಿಕೊಡುತ್ತಿದ್ದ ಧೋಬಿಯು ದರೋಡೆ ಮಾಡುವ ಉದ್ದೇಶದಿಂದ ಮತ್ತಿಬ್ಬರ ಸಹಾಯದಿಂದ ಮನೆಯೊಳಗೆ ನುಗ್ಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Kitty Kumaramangalam (in pic 1), wife of late ex-Union Min P Rangarajan Kumaramangalam murdered last night.
Her house help said that laundryman came to the house around 8.30 pm. 2 more persons came who tied the maid & murdered Kitty Kumaramangalam. Laundryman arrested: Police pic.twitter.com/bQnHVhPawH
ಕಿಟ್ಟಿ ಕುಮಾರಮಂಗಲಂ ಅವರ ಸಹಾಯಕಿಯನ್ನು ಕೋಣೆಯೊಳಗೆ ಕಟ್ಟಿ ಹಾಕಿದ ಬಳಿಕ ಆಕೆಯ ಮೇಲೆ ಹಲ್ಲೆ ಮಾಡಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 11ರ ವೇಳೆಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಬಳಿಕ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
Delhi | Kitty Kumaramangalam, wife of late former Union Minister P Rangarajan Kumaramangalam, was murdered at her residence in Vasant Vihar last night. One person detained & search is on for two other accused: DCP South-West