ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದ ಶೋಭಾ ನಾಟಿ ಮಾಡಿ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಜೊತೆ ಟ್ರ್ಯಾಕ್ಟರ್ ಏರಿ ನಾಟಿ ಯಂತ್ರದ ಮೂಲಕವೂ ನಾಟಿ ಮಾಡಿದರು. ನಂತರ ಸಾತನೂರು ಗ್ರಾಮದ ಆಲೆಮನೆಗೆ ತೆರಳಿ ಬೆಲ್ಲ ತಯಾರಾಗುವ ಪ್ರಕ್ರಿಯೆ ವೀಕ್ಷಿಸಿದರು. ಕ್ರಷರ್‌ಗೆ ಕಬ್ಬು ಕೊಟ್ಟರು, ಬೆಲ್ಲದ ರುಚಿ ಸವಿದರು.