comparemela.com


ಏಷ್ಯಾದ ಅತ್ಯಂತ ಹಳೆಯ ದಿನಪತ್ರಿಕೆ
ಜುಲೈ 1ರಂದು 200 ವರ್ಷಕ್ಕೆ ಕಾಲಿಡಲಿರುವ ‘ಮುಂಬೈ ಸಮಾಚಾರ್‌’ ದೈನಿಕ
ಪ್ರಜಾವಾಣಿ ವಾರ್ತೆ Updated:
27 ಜೂನ್ 2021, 13:58 IST
ಅಕ್ಷರ ಗಾತ್ರ :ಆ |ಆ |ಆ
ಮುಂಬೈ: ನಗರದಿಂದ ಪ್ರಕಟವಾಗುತ್ತಿರುವ ಏಷ್ಯಾದ ಅತ್ಯಂತ ಹಳೆಯ ಗುಜರಾತಿ ಭಾಷೆಯ ದಿನಪತ್ರಿಕೆ ‘ಮುಂಬೈ ಸಮಾಚಾರ್‌’ ಜುಲೈ 1ರಂದು ಪ್ರಕಟಣೆಯ 200ನೇ ವರ್ಷಕ್ಕೆ ಕಾಲಿಡಲಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬೈ ನಗರಕ್ಕೆ ಸಂಬಂಧಿಸಿದ ಎಲ್ಲ ಸ್ಥಿತ್ಯಂತರಗಳಿಗೆ ಈ ಪತ್ರಿಕೆ ಸಾಕ್ಷಿಯಾಗಿದೆ. ಅದು, ಆರಂಭಿಕ ದಿನಗಳಲ್ಲಿ ಬಾಂಬೆ ಎಂಬ ಹೆಸರಿನಿಂದ ಹಿಡಿದು ಇತ್ತೀಚೆಗೆ ನಗರದ ಹೆಸರು ಮುಂಬೈ ಎಂದು ಮರುನಾಮಕರಣಗೊಂಡ ವರದಿಗಳನ್ನು ಪ್ರಕಟಿಸಿದೆ.
ಮುಂಬೈನ ಫೋರ್ಟ್‌ ಪ್ರದೇಶದ ಹಾರ್ನಿಮನ್‌ ಸರ್ಕಲ್‌ ಸಮೀಪದ ಎಸ್‌ಎ ಬ್ರೆಲ್ವಿ ರೋಡ್‌ಗೆ ಹೊಂದಿಕೊಂಡಂತೆ ಪತ್ರಿಕೆ ಕಚೇರಿ ಇದೆ.
ಪಾರ್ಸಿ ವಿದ್ವಾಂಸ ಫರ್ದೂಂಜಿ ಮರ್ಜಬಾನ್‌ ಎಂಬುವವರು 1822ರಲ್ಲಿ ‘ಬಾಂಬೆ ಸಮಾಚಾರ್‌’ ಹೆಸರಿನಲ್ಲಿ ಪತ್ರಿಕೆಯನ್ನು ಆರಂಭಿಸಿದರು. ಅವರು 1812ರಲ್ಲಿ ಮೊದಲು ಮುದ್ರಣಾಲಯ ಸ್ಥಾಪಿಸಿದರು. 1814ರಲ್ಲಿ ಗುಜರಾತಿ ಕ್ಯಾಲೆಂಡರ್‌ ಹೊರತಂದರು.
1933ರಿಂದ ಕಾಮಾ ಕುಟುಂಬ ಈ ಪತ್ರಿಕೆಯ ಮಾಲೀಕತ್ವ ಹೊಂದಿದೆ. ಮಾಧ್ಯಮ ಕ್ಷೇತ್ರದ ಹಿರಿಯರಾದ ಹಾರ್ಮುಸ್‌ಜಿ ಎನ್‌.ಕಾಮಾ ಈ ಪತ್ರಿಕಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಪತ್ರಿಕೆಯ ಬೆಲೆ ₹ 10 ಇದ್ದು, 1.5 ಲಕ್ಷ ಪ್ರತಿಗಳ ಪ್ರಸರಣ ಹೊಂದಿದೆ.
‘ಪತ್ರಿಕೆಯು ವೈಭವದ ಪರಂಪರೆ ಹೊಂದಿದ್ದು, ಈ ಪರಂಪರೆಯನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದು ‘ಮುಂಬೈ ಸಮಾಚಾರ್‌’ನ ಸಂಪಾದಕ ನೀಲೇಶ್‌ ದವೆ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.
‘ಜುಲೈ 1ರಂದು ಪತ್ರಿಕೆ ಪ್ರಕಟಣೆಗೆ 200 ವರ್ಷ ತುಂಬಲಿದ್ದು, ಆ ಕ್ಷಣಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದೇವೆ’ ಎಂದೂ ಹೇಳಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪತ್ರಿಕೆ ಮಹತ್ವದ ಪಾತ್ರ ವಹಿಸಿತ್ತು. ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ವಿಷಯಗಳನ್ನು ಆಗ ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ವಲ್ಲಭಭಾಯಿ ಪಟೆಲ್‌ ಸೇರಿದಂತೆ ಸ್ವಾತಂತ್ಯ ಹೋರಾಟಗಾರರು ಪ್ರಸ್ತಾಪಿಸುತ್ತಿದ್ದರು.
ಕೋಲ್ಕತ್ತದಿಂದ ಪ್ರಕಟವಾಗುತ್ತಿದ್ದ ‘ಹಿಕ್ಕೀಸ್‌ ಬೆಂಗಾಲ್‌ ಗೆಜೆಟಿಯರ್’ ಅಥವಾ ‘ಒರಿಜಿನಲ್‌ ಕಲ್ಕತ್ತ ಜನರಲ್‌ ಅಡ್ವರ್ಟೈಸರ್’ ಏಷ್ಯಾದ ಮೊದಲ ಪತ್ರಿಕೆ ಎನಿಸಿತ್ತು. ಆದರೆ, ಈ ಪತ್ರಿಕೆ 1780 ರಿಂದ 1782ರ ವರೆಗೆ ಮಾತ್ರ ಪ್ರಕಟಗೊಂಡಿತ್ತು.

Related Keywords

Mumbai ,Maharashtra ,India ,Bombay ,Mahatma Gandhi , ,Mumbai Region ,Editor Sunday ,Mumbai Samachar ,மும்பை ,மகாராஷ்டிரா ,இந்தியா ,குண்டு ,மகாத்மா காந்தி ,மும்பை பகுதி ,மும்பை சமாசர் ,

© 2025 Vimarsana

comparemela.com © 2020. All Rights Reserved.