comparemela.com


Sanjevani
?????????????????????????????????????????????????????????
ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆ
ಸುಳ್ಯ , ಜು.೩೦- ಕಳೆದ ಎರಡು ವರ್ಷದಿಂದ ತನ್ನ ವಾರ್ಡ್ ಗೆ ಒಂದು ರೂ ಅನುದಾನ ಬಂದಿಲ್ಲ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದುದರಿಂದ ೧೦ ಲಕ್ಷ ರೂ ಅನುದಾನ ನೀಡದಿದ್ದಾರೆ ನಗರ ಪಂಚಾಯಿತಿ ಸಭೆಯಲ್ಲಿ ಧರಣಿ ನಡೆಸುತ್ತೇನೆ ಎಂದು ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಹೇಳಿದ್ದಾರೆ.
ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಹಿಂದೆಲ್ಲಾ ಪ್ರತಿ ವರ್ಷ ಅಭಿವೃದ್ಧಿಗೆ ಅನುದಾನ ಬರುತ್ತಿತ್ತು. ಕಳೆದ ಎರಡು ವರ್ಷದಿಂದ ಒಂದು ರೂ ಅಭಿವೃದ್ಧಿ ಅನುದಾನ ಬಂದಿಲ್ಲ.ನಗರ ಪಂಚಾಯಿತಿ ಆದಾಯಗಳೆಲ್ಲವೂ ಇತರ ಖರ್ಚುಗಳೇ ಆಗುತಿದೆ. ಅಭಿವೃದ್ಧಿಗೆ ಅನುದಾನ ದೊರೆಯುತ್ತಿಲ್ಲ ಎಂದರು. ಬಿ.ಎಸ್.ಯಡಿಯೂರಪ್ಪ ದ.ಕ.ಜಿಲ್ಲೆಗೆ ೯೫ ಕೋಟಿ ವಿಶೇಷ ಅನುದಾನ  ನೀಡಿದ್ದಾರೆ.ಆದರೆ ಪಟ್ಟಿಯಲ್ಲಿ ಸುಳ್ಯದ ಹೆಸರಿಲ್ಲ, ಸುಳ್ಯಕ್ಕೆ ಈವಿಶೇಷ ಅನುದಾನ ಯಾಕಿಲ್ಲಾ ಎಂದು ಅವರು ಪ್ರಶ್ನಿಸಿದರು. ಕಸದ ಸಮಸ್ಯೆ ಇನ್ನೂ ಪರಿಹಾರ ಆಗದ ಬಗ್ಗೆ ಕೆ.ಎಸ್.ಉಮ್ಮರ್, ಎಂ.ವೆಂಕಪ್ಪ ಗೌಡ ಗಮನ ಸೆಳೆಸರು. ಕಲ್ಪರ್ಪೆಯಲ್ಲಿರುವ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಸ್ಥಳವನ್ನು ಸ್ವಾಧೀನಪಡಿಸಬೇಕು ಎಂದು ಉಮ್ಮರ್ ಹೇಳಿದರು. ೩ ಎಕ್ರೆ ಸ್ಥಳ ಮಂಜೂರಾಗಿದ್ದರೂ ಗಡಿ ಗುರುತು ಆಗಿಲ್ಲ ಎಂದು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸೇರಿಸಿ ಜಂಟಿ ಸರ್ವೆ ಮಾಡಿ ಎಂದು ವೆಂಕಪ್ಪ ಗೌಡ ಸಲಹೆ ನೀಡಿದರು.
ನಗರ ಪಂಚಾಯಿತಿಗೆ ಬರಲು ಬಾಕಿ ಇರುವ ಬಿಲ್ ಗಳನ್ನು ಕೂಡಲೇ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಬೇಕು. ಸಂಗ್ರಹ ಮಾಡದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಿ, ಬಿಲ್ ಸಂಗ್ರಹಕ್ಕೆ ಕ್ರಮ ಕೈಗೊಳ್ಳಿ ಎಂದು ವೆಂಕಪ್ಪ ಗೌಡ ಹೇಳಿದರು.
ಲಸಿಕೆ ವಿತರಣೆಯ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ವಾಕ್ಸಮರ ನಡೆದ ವಿದ್ಯಮಾನಕ್ಕೆ ಸಾಮಾನ್ಯ ಸಭೆ ವೇದಿಕೆಯಾಯಿತು. ಲಸಿಕೆ ವಿತರಣೆಯಲ್ಲಿ ರಾಜಕೀಯ ನಡೆಯುತಿದೆ. ಪ್ರಭಾವ ಬಳಸಿ ಲಸಿಕೆ ವಿತರಣೆ ನಡೆಸಲಾಗುತ್ತಿದೆ, ಜನ ಸಾಮಾನ್ಯರಿಗೆ ಲಸಿಕೆ ಸಿಗ್ತಾ ಇಲ್ಲ ಎಂಬ ಆರೋಪವನ್ನು ವಿರೋಧ ಪಕ್ಷದ ಸದಸ್ಯರಾದ ಎಂ.ವೆಂಕಪ್ಪ ಗೌಡ ಮತ್ತು ಕೆ.ಎಸ್.ಉಮ್ಮರ್ ಸಭೆಯಲ್ಲಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತು ಇತರ ಆಡಳಿತ ಪಕ್ಷದ ಸದಸ್ಯರು ಲಸಿಕೆ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ, ಸದಸ್ಯರು ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು. ಕೇಂದ್ರ ಸರಕಾರ ಲಸಿಕೆಗೆ ಬೇಡಿಕೆ ಸಲ್ಲಿಸಿದ್ದರೂ ಲಸಿಕೆ ಉತ್ಪಾದನಾ ಕಂಪೆನಿಗಳು ಲಸಿಕೆ ಪೂರೈಕೆ ಮಾಡಲು ವಿಳಂಬ ಮಾಡುತಿದೆ ಎಂದು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು. ಲಸಿಕೆ ವಿತರಣೆಗೆ ಟೋಕನ್ ನೀಡಬೇಕು ಎಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದನಾಯ್ಕ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮೀ, ಇಂಜಿನಿಯರ್ ಶಿವಕುಮಾರ್,ನ.ಪಂ.ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Related Keywords

Karnataka ,India ,Rohtak ,Haryana , ,Her Ward ,President Vinay ,Vice President Rohtak ,கர்நாடகா ,இந்தியா ,ரொஹ்டாக் ,ஹரியானா ,ப்ரெஸிடெஂட் வினய் ,

© 2024 Vimarsana

comparemela.com © 2020. All Rights Reserved.