comparemela.com


Sanjevani
ಯುವ ನಟ ಶ್ರೇಯಸ್ ಮಂಜು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮೂರನೇ ಚಿತ್ರ ” ರಾಣ” ಸೆಟ್ಟೇರಿದೆ. ನಟ ಉಪೇಂದ್ರ ಅವರು ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ ‘ರಾಣ” ನಿಗೆ ನಿರ್ಮಾಪಜ ಗುಜ್ಹಲ್ ಪುರುಷೋತ್ತಮ ಅವರ ತಾಯಿ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು.
ಮಾಸ್​ ಆ್ಯಕ್ಷನ್ ಶೈಲಿಯ ಸಿನಿಮಾ ಇದಾಗಿದ್ದು ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರಿನ ಗವಿಪುರಂನ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಹಿರಿಯ ನಿರ್ಮಾಕ ಕೆ.ಮಂಜು ದಂಪತಿ ಆಗಮಿಸಿ ಪುತ್ರನ ಸಿನಿಮಾಗೆ ಶುಭ ಹಾರೈಸಿದರು.
ಮೊದಲ ಬಾರಿ ನಂದಕಿಶೋರ್ ಮತ್ತು ಶ್ರೇಯಸ್ ಜತೆ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಮಾತಿಗಿಳಿದ ನಂದಕಿಶೋರ್, ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನ ನಡೆಯಲಿದೆ. ಒಟ್ಟಾರೆ 40-45 ದಿನದ ಚಿತ್ರೀಕರಣದ ಯೊಜನೆ ಹಾಕಿದ್ದೇವೆ. ಬಹುತೇಕ ಹೊಸಬರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಪಾತ್ರಕ್ಕೆ ಬಾಡಿ ಬಿಲ್ಡರ್​ ರಾಘವೇಂದ್ರ ಅವರನ್ನು ಪರಿಚಯಿಸುತ್ತಿದ್ದೇವೆ ಎಂದರು.
ನಟ ಶ್ರೇಯಸ್, ‘ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಪಡ್ಡೆಹುಲಿಯಲ್ಲಿ ಕಾಮಿಡಿ ಫನ್, ವಿಷ್ಣು ಪ್ರಿಯ ಚಿತ್ರದಲ್ಲಿ ಸೌಮ್ಯ ಸ್ವಭಾವದ ಪಾತ್ರವಿತ್ತು ಈ ಚಿತ್ರದಲ್ಲಿ ಸಂಪೂರ್ಣ ಚೇಂಜ್ ಓವರ್ ಇದೆ. ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದೇನೆ. ಆ್ಯಕ್ಷನ್​ಗೆ ಸಾಕಷ್ಟು ಪ್ರಾಮುಖ್ಯತೆ ಇರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದೇನೆ ಎಂದರು.
ಶ್ರೇಯಸ್​ಗೆ ಇಬ್ಬರು ನಾಯಕಿಯರು. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ .ಈ ಪೈಕಿ ರೀಷ್ಮಾ, ಚಿತ್ರದಲ್ಲಿ ಮುದ್ದಾದ ಪಾತ್ರ ನೀಡಿದ್ದಾರೆ. ನಂದಕಿಶೋರ್ ಅವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದೀಗ ಸಿನಿಮಾ ಮೂಲಕ ಈಡೇರಿದೆ ಎಂದರು.
ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಎರಡನೇ ಚಿತ್ರ ನಾಲ್ಕು ಹಾಡುಗಳಿರಲಿದ್ದು, ಮಾಸ್ ಶೈಲಿಯಲ್ಲಿ ಮೂಡಿಬರಲಿವೆಯಂತೆ ಎಂದರು. ಶೇಖರ್ ಚಂದ್ರ ಛಾಯಾಗ್ರಹಣ, ಚಂದನ್ ಶೆಟ್ಟಿ,ಸಂಗೀತವಿದೆ

Related Keywords

Karnataka ,India ,Bengaluru ,Rajni Bhardwaj , ,Kishore Action ,Bengaluru Rock Temple ,North Karnataka ,Body Raghavendra ,Changeover ,கர்நாடகா ,இந்தியா ,பெங்களூரு ,ரஜ்னி பரத்வாஜ் ,வடக்கு கர்நாடகா ,

© 2025 Vimarsana

comparemela.com © 2020. All Rights Reserved.