comparemela.com


Sanjevani
ಲಿಂಗಸುಗೂರ.ಜು.೧೭- ಲಿಂಗಸಗೂರು ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕರಪತ್ರದಲ್ಲಿ ಹಾಗೂ ಜಾಹಿರಾತು ಗಳಲ್ಲಿ ಕನ್ನಡ ಬಾಷೆ ಪದಗಳ ಬಳಕೆ ಮಾಡದಿರುವುದು ಮತ್ತು ಆನ್‌ಲೈನ್ ತರಗತಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯಾದ್ಯಂತ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ ನಡೆದಿತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಚಾರದಲ್ಲಿ ತೊಡಗಿವೆ ತಾಲೂಕಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಚಾರ ಕರಪತ್ರದಲ್ಲಿ ಹಾಗೂ ಜಾಹಿರಾತಿ ನಲ್ಲಿ.ಕನ್ನಡ ಭಾಷೆಯನ್ನು ಬಳಸದೆ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡುತ್ತಿದ್ದಾರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ ಕನ್ನಡಭಾಷೆಗೆ ಅವಮಾನಿಸುವ ಕೆಲಸವನ್ನು ಮಾಡಿದ್ದಾರೆ.
೨೦೦೦ ವರ್ಷಗಳ ಕಾಲ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ
ಶಿಕ್ಷಣ ನೀತಿಯ ಬಗ್ಗೆ ಆಕ್ರೋಶ ಹೊರಹಾಕಿದರು ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಪ್ರಚಾರ ಕರಪತ್ರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಅದಲ್ಲದೆ ಈಗಾಗಲೇ ಆನ್ ಲೈನ್ ತರಗತಿಗಳು ಪ್ರಾರಂಭ ವಾಗಿದ್ದು ಆನ್ ಲೈನ್ ತರಬೇತಿ ಶುಲ್ಕವನ್ನು ಪಡೆಯಲು ಸರ್ಕಾರದ ಆದೇಶವಿದೆ ಆದರೆ ಖಾಸಗಿ ಶಾಲೆ- ಕಾಲೇಜುಗಳಿಂದ ಸಂಪೂರ್ಣ ಆನ್ಲೈನ್ ಶುಲ್ಕವನ್ನು ವಸೂಲಿ ಮಾಡತ್ತಿವೆ ಕಳೆದ ಎರಡು ವರ್ಷಗಳಲ್ಲಿ ಬಾಧಿಸಿದ ಕೋವಿಡ್ ಮಾರಿಯಿಂದ ಜನ ತತ್ತರಿಸಿಹೋಗಿದ್ದಾರೆ ಇಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಪೋಷಕರಿಂದ ಸಂಪೂರ್ಣ ಫೀಸ್ ವಸೂಲಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಸರಕಾರದ ಆದೇಶಕ್ಕೆ ವಿರುದ್ಧವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆದುಕೊಳ್ಳುತ್ತಿದ್ದು ಇಂತಹ ಖಾಸಗಿ ಶಿಕ್ಷಣ ಸಂಸ್ಥೆಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಲಿಂಗಸುಗೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ತಾಲ್ಲೂಕು ಅದ್ಯೆಕ್ಷ ತಿಮ್ಮರೆಡ್ಡಿ ಹಾಗೂ ಸಂಘಟನೆಯ ಪಧಾಧಿಕಾರಿಗಳು ಮನವಿ ಸಲ್ಲಿಸಿದರು.

Related Keywords

Karnataka Rakshana Vedike ,Army District ,Her ,Law Field ,கர்நாடகா ரக்ஷனா வேடிக்கே ,இராணுவம் மாவட்டம் ,அவள் ,சட்டம் புலம் ,

© 2025 Vimarsana

comparemela.com © 2020. All Rights Reserved.