comparemela.com


Sanjevani
ಕಲಬುರಗಿ ಜು 22: ಕಳೆದ ಹಲವು ದಿನಗಳಲ್ಲಿ ಪುಷ್ಯ ಮಳೆಯು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತನ್ನ ಪ್ರತಾಪ ತೋರಿದ್ದು, ಬಹುತೇಕ ಕಡೆ ಮಳೆಯಾಗಿದೆ.
ಇಡೀ ದಿನ ಮೋಡ ಕವಿದ ತಂಪು ವಾತಾವರಣವಿದ್ದು ಸಂಜೆ ಸಣ್ಣಗೆ ಮಳೆ ಆರಂಭವಾಗುತ್ತಿದೆ.ಬಿಸಿಲೂರಿನಲ್ಲಿ ಸೂರ್ಯನ ಹಾಜರಾತಿ ಕಡಿಮೆಯಾಡಿದೆ.ಇಂದು ಬೆಳಿಗ್ಗೆ ಕಲಬುರಗಿ ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು,ಸಣ್ಣಗೆ ಮಳೆ ಹನಿಯುತ್ತಿದೆ.
ಜಿಲ್ಲೆಯಲ್ಲಿ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಹಾಳಾಗಿ ಸಂಚಾರ ಅಸ್ತವ್ಯಸ್ತವಾಗಿದೆ.ಹೊಲಗದ್ದೆಗಳಲ್ಲಿ ನೀರು ನಿಂತಿದೆ.
ಬುಧವಾರ ಬೆಳಿಗ್ಗೆ ಬೆಂಗಳೂರಿನ ಹವಾಮಾನ ಕೇಂದ್ರ ದಾಖಲಿಸಿದ ವರದಿಯಂತೆ ನೈರುತ್ಯ ಮುಂಗಾರು ರಾಜ್ಯದಾದ್ಯಂತ ಸಾಮಾನ್ಯವಾಗಿತ್ತು.ಬೀದರ ಜಿಲ್ಲೆ ಜನವಾಡದಲ್ಲಿ 3 ಸೆಂಮೀ ಮಳೆಯಾಗಿದೆ. ಹುಲಸೂರು,ಹುಮನಾಬಾದ್, ಮುಡಬಿ, ನಿರ್ಣಾ, ಹಳ್ಳಿಖೇಡ,ಮನ್ನಹಳ್ಳಿ,ಹಲಬರ್ಗ,ಬೀದರ,ಕಲಬುರಗಿ ಮತ್ತು ಸೇಡಂಗಳಲ್ಲಿ 2 ಸೆಂಮೀ ಮಳೆಯಾಗಿದೆ.
ಬೀದರ ಜಿಲ್ಲೆಯ ನಿಟ್ಟೂರು,ಭಾಲ್ಕಿ,ಔರಾದ, ಕಲಬುರಗಿ ಜಿಲ್ಲೆಯ ಗುಂಡಗುರ್ತಿ,ಮಹಾಗಾಂವ ಮತ್ತು ಅಡಕಿಯಲ್ಲಿ ತಲಾ 1 ಸೆಂಮೀ ಮಳೆಯಾಗಿದೆ.

Related Keywords

Bhalki ,Haryana ,India ,Karnataka ,Bengaluru ,Nittur , ,District Nittur ,பால்கி ,ஹரியானா ,இந்தியா ,கர்நாடகா ,பெங்களூரு ,நித்துற் ,

© 2024 Vimarsana

comparemela.com © 2020. All Rights Reserved.