comparemela.com


Sanjevani
ಹಿರಿಯೂರು.ಜು.20; ನಗರದ ಮೈಸೂರು ರಸ್ತೆಯಲ್ಲಿರುವ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ವತಿಯಿಂದ ಇಲ್ಲಿನ ಗಿರೀಶ ಬಿಇಡಿ, ಕಾಲೇಜು ಹಾಗೂ ಜ್ಞಾನಭಾರತಿ ಬಿಇಡಿ ,ಕಾಲೇಜಿನ 4 ಮತ್ತು 2 ನೇ ಸೆಮ್ ಪರೀಕ್ಷೆಗಳು ನಡೆಯುತ್ತಿವೆ, ಮಂಗಳವಾರ ಒಟ್ಟು 182 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದರು. ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ್,ಸ್ಯಾನಿಟೈಜರ್, ಹಾಗು ಅಂತರ ಕಾಪಾಡುವ  ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಗಿರೀಶ ಬಿಇಡಿ.ಕಾಲೇಜಿನ ಪ್ರಾಂಶುಪಾಲರಾದ ಸುಧಾ ಹಾಗೂ ಉಪನ್ಯಾಸಕರಾದ ನಯೀಮ್,  ನಾಗರಾಜ್, ಪ್ರಕಾಶ್, ಲೋಕೇಶ್ ಪ್ರಮೋದ್ ಹಾಗೂ ಜ್ಞಾನಭಾರತಿ ಕಾಲೇಜಿನ ಪ್ರಾಂಶುಪಾಲರಾದ ಎನ್. ಧನಂಜಯ ಹಾಗೂ ಉಪನ್ಯಾಸಕರಾದ ಅರುಣಾಕುಮಾರಿ, ನಾಗೇಶ್, ಬಸವರಾಜ್ ಹಾಗೂ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ  ಪ್ರೊ ಡಿ ಚಂದ್ರಶೇಖರಪ್ಪ ಇದ್ದರು.

Related Keywords

Hiriyur ,Karnataka ,India ,Bangalore ,Madras ,Tamil Nadu ,Lokesh Pramod ,College Sudha ,College Pro ,Bangalore University ,Mysore Road ,ஹிரியூர் ,கர்நாடகா ,இந்தியா ,பெங்களூர் ,மெட்ராஸ் ,தமிழ் நாடு ,கல்லூரி ப்ரொ ,பெங்களூர் பல்கலைக்கழகம் ,மைஸாயர் சாலை ,

© 2025 Vimarsana

comparemela.com © 2020. All Rights Reserved.