comparemela.com


Sanjevani
ಚಿತ್ತಾಪುರ:ಅ.4: ನೂತನ ಸಿಎಂ ಬೊಮ್ಮಾಯಿ ಅವರು ಅಂಧೇರಿ ನಗರಿ ಮೇ ಚೌಪಾಟ್ ರಾಜಾ (ಹಾಳೂರಿಗೆ ಉಳಿದವನೇ ರಾಜ) ನಂತಾಗಿದ್ದಾರೆ ಎಂದು ಪ್ರಸ್ತುತ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ದಿಗ್ಗಾಂವ ಗ್ರಾಮದಲ್ಲಿ ಕೆಕೆಆರ್‍ಡಿಬಿ ಅನುದಾನ ರೂ 31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ಶಾಲಾ ಕೊಠಡಿಗಳ ಉದ್ಘಾಟನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನ ರೂ10 ಲಕ್ಷ ಗಳಲ್ಲಿ ನಿರ್ಮಿಸಲಾಗುತ್ತಿರುವ ಕನಕ ಭವನ ಹಾಗೂ ರೂ 10 ಲಕ್ಷಗಳಲ್ಲಿ ನಿರ್ಮಿಸಲಾಗುತ್ತಿರುವ ಅಂಬಿಗರ ಚೌಡಯ್ಯ ಭವನದ ಅಡಿಗಲ್ಲು ಕಾಮಗಾರಿಗೆ ಚಾಲನೆ ಹಾಗೂ ವಾಲ್ಮೀಕ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ಶಾಸಕರು ಹಾಗೂ ಮಂತ್ರಿಗಳು ಇಬ್ಬರಿಗೊಬ್ಬರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹಾಗಾಗಿ, ಬಿಜೆಪಿ ಎಂದರೆ ಬ್ಲ್ಯಾಕ್ ಮೇಲ್ ಜನತಾ ಪಾರ್ಟಿ ಅಥವಾ ಭ್ರಷ್ಠರ ಜನತಾ ಪಾರ್ಟಿನ ಎನ್ನುವ ಅನುಮಾನ ಮೂಡುತ್ತಿದೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಆಗಿದ್ದರು ಈಗ ಸಿಎಂ, ಸೂಪರ್ ಸಿಎಂ ಹಾಗೂ ಶಾಡೋ ಸಿಎಂ ಆಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಠಾಚಾರ ಮಿತಿಮೀರಿದೆ. ವಿಎಸ್ ಟಿ ( ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ) ಕೊಡದಿದ್ದರೆ ಕೆಲಸಗಳು ಆಗುವುದು ಸಾಧ್ಯವಿಲ್ಲ. ಈಶ್ವರಪ್ಪ ಹಾಗೂ ಯೋಗೇಶ್ವರ ಅವರು ಸರ್ಕಾರದ ವಿರುದ್ದ ಸಮರ ಸಾರಿದ್ದರೆ ಯತ್ನಾಳ್ ಅವರು ಸರ್ಕಾರದ ಭ್ರಷ್ಠಾಚಾರದ ಬಗ್ಗೆ ಟೀಕಿಸುತ್ತಲೇ ಇದ್ದಾರೆ ಎಂದರು.
ಹೈಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಕೇವಲ ನಾಮಕರಣ ಮಾಡಲಾಗಿದೆಯೇ ಹೊರತು ಕೆಕೆಆರ್ ಡಿಬಿಗೆ ವಾರ್ಷಿಕ ಅನುದಾನ ನೀಡಿಲ್ಲ. ಹಾಗಾದರೆ ಕಲ್ಯಾಣ ಪ್ರದೇಶ ಕಲ್ಯಾಣ ವಾಗುವುದು ಯಾವಾಗ ? ಎಂದು ಪ್ರಶ್ನಿಸಿದರು.
ಚಿತ್ತಾಪುರ ತಾಲೂಕಿನಲ್ಲಿ ಕೆಲ ನಿರುದ್ಯೋಗಿ ಮಾಜಿ ಶಾಸಕರಿದ್ದಾರೆ. ಪಸೆರ್ಂಟೇಜ್ ಬಂದಿಲ್ಲ ಎಂದಾಗ ಅಭಿವೃದ್ದಿ ಕಾಮಗಾರಿಗಳಿಗೆ ತಡೆ ನೀಡುವುದೇ ಅವರ ಉದ್ಯೋಗವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ನಿರದ್ಯೋಗ ತಾಂಡವವಾಡುತ್ತಿದೆ. ಉದ್ಯೋಗ ಸಿಗದೇ ದೇಶಾದ್ಯಂತ 3000 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಅವರಲ್ಲಿ 600 ಜನ ಸೇರಿದ್ದಾರೆ. ಕಾರ್ಮಿಕರು, ಮಹಿಳೆಯರು, ದುಡಿಯುವ ವರ್ಗದ ಅಭಿವೃದ್ದಿಗೆ ದುಡ್ಡಿಲ್ಲ. ಆದರೆ, ಆಪರೇಷನ್ ಕಮಲ ಮಾಡಲು ಸರ್ಕಾರದ ಬಳಿ ಸಾಕಷ್ಟು ದುಡ್ಡಿದೆ ಎಂದು ಕೀಟಲೆ ಮಾಡಿದರು.
ಅಪೌಷ್ಠಿಕ ಮಕ್ಕಳಿಗೆ ಕೊರೋನಾ ಮೂರನೆಯ ಅಲೆ ಜಾಸ್ತಿ ತೊಂದರೆ ಮಾಡಲಿದೆ ಎಂದು ಸರ್ಕಾರಕ್ಕೆ ಈಗಾಗಲೇ ತಜ್ಞರ ಸಮಿತಿ ಎಚ್ಚರಿಸಿದರೆ. ಆದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಾಸಕ- ಮಂತ್ರಿಗಳು ತಮ್ಮ ಭವಿಷ್ಯ ಹುಡುಕುತ್ತಾ ದಿಲ್ಲಿ, ಬೆಂಗಳೂರು ಅಲೆಯುತ್ತಿದ್ದಾರೆ ಎಂದರು.
ಕೋರಾನ ಬಂದರೆ ಗೋಮೂತ್ರ ಕುಡಿಯಿರಿ, ಸೆಗಣಿ ಮೈಗೆ ಮೆತ್ತಿಕೊಳ್ಳಿ, ರಾಮದೇವ ತಯಾರಿಸಿದ ಔಷಧಿ ತೆಗೆದುಕೊಳ್ಳಿ ಎಂದು ಬಿಜೆಪಿ ಕೆಲ ನಾಯಕರು ಹೇಳುತ್ತಾರೆ ಇದೆಲ್ಲ ಅವೈಜ್ಞಾನಿಕ. ನೀವೆಲ್ಲ ಅವರ ಮಾತು ಕೇಳಬೇಡಿ. ಯಡಿಯೂರಪ್ಪನವರಿಗೆ ಕೊರೋನಾ ಬಂದಾಗ ಅತಿದುಬಾರಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರೇಕೆ ಗೋಮೂತ್ರ ಕುಡಿಯಲಿಲ್ಲ ? ಹಾಗಾಗಿ ನೀವು ಅವರ ಮಾತನ್ನು ಕೇಳಬೇಡಿ ಲಸಿಕೆ ಹಾಕಿಸಿಕೊಳ್ಳಿ ಅದೇ ಕೊರೋನ ತಡೆಗೆ ಸಹಾಯಕವಾಗಲಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರಿಯಾನಾ ಬೇಗಂ,ಶಿವರುದ್ರ ಬೇಣಿ, ಭೀಮಣ್ಣ ಸಾಲಿ, ಜಗನಗೌಡ ಪಾಟೀಲ್, ಸಿದ್ದುಗೌಡ ಪಾಟೀಲ್, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್ ಕರದಳ್ಳಿ ಶಿವಾನಂದ ಸೇರಿದಂತೆ ಮತ್ತಿತರಿದ್ದರು.

Related Keywords

Manipal ,Karnataka ,India ,Bangalore ,Delhi ,Patil Sivananda ,Service Tax ,School Inauguration ,Town May Raja ,Hall Inauguration ,Chittapura Taluk ,Operation Lotus ,Sport Drink ,மணிப்பல் ,கர்நாடகா ,இந்தியா ,பெங்களூர் ,டெல்ஹி ,சேவை வரி ,செயல்பாடு தாமரை ,

© 2025 Vimarsana

comparemela.com © 2020. All Rights Reserved.