comparemela.com


Sanjevani
ನಿವೃತ್ತ ದೈಹಿಕ ಶಿಕ್ಷಣ, ಶಿಕ್ಷಕ ಮಹಾಂತಪ್ಪ ನಾಗೂರುಗೆ ಅಭಿನಂದನೆ
ನಿವೃತ್ತ ದೈಹಿಕ ಶಿಕ್ಷಣ, ಶಿಕ್ಷಕ ಮಹಾಂತಪ್ಪ ನಾಗೂರುಗೆ ಅಭಿನಂದನೆ
ತಿ.ನರಸೀಪುರ: ಆ:4: ತಾಲ್ಲೂಕಿನಲ್ಲಿ 33 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾಂತಪ್ಪ ನಾಗೂರು ಅವರನ್ನು ಅಭಿನಂದಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗ ಕಚೇರಿ, ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬಿಇಓ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ವಿ.ಶಿವಶಂಕರಮೂರ್ತಿ ಮಾತನಾಡಿ ಮಹಾಂತಪ್ಪನವರು ಕೂಡಲ ಸಂಗಮದಲ್ಲಿ ಜನಿಸಿ ತ್ರಿವೇಣಿ ಸಂಗಮ ಸ್ಥಳವಿರುವ ಈ ತಾಲ್ಲೂಕಿನಲ್ಲಿ 33 ವರ್ಷಗಳಿಂದ ಸೇವೆ ಸಲ್ಲಿಸಿ ಹಲವಾರು ಸೇವೆಗಳನ್ನು ಪ್ರಶಂಸೆ ಗಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್, ಅಕ್ಷರ ದಾಸೋಹ, ಸಾಕ್ಷರ ಭಾರತ್ ಗಳಲ್ಲಿ ಇಂತಹ ಹಲವಾರು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಿದ್ದಾರೆ ಇದು ಎಲ್ಲರಿಗೂ ಲಭಿಸುವುದಿಲ್ಲ. ಈ ಸಂದರ್ಭದಲ್ಲಿ ಭಗವಂತ ಅವರಿಗೆ ಒಳ್ಳೆ ಆರೋಗ್ಯ ಭಾಗ್ಯ ಕೊಡಲಿ ಎಂದು ಆಶಿಸಿದರು
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹಾಂತಪ್ಪ ನಾಗೂರ್ ನಾನು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನನಗೆ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಮುಖ್ಯವಾಗಿ ನನಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಂತಹ ಕಠಿಣ ಸಂದರ್ಭ ಬಂದರೂ ಧೈರ್ಯವಾಗಿ ಕಾರ್ಯನಿರ್ವಹಿಸುವಂತೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಅದರ ಫಲವಾಗಿ ಕೈಲಾದಷ್ಟು ಪ್ರಾಮಾಣಿಕವಾಗಿ ಪೂರ್ಣ ಪ್ರಮಾಣದ ಸೇವೆಯನ್ನು ಇದೇ ತಾಲ್ಲೂಕಿನಲ್ಲಿ ಸಲ್ಲಿಸಿದ್ದೇನೆ.ಇದು ನನಗೆ ಬಹಳ ಖುಷಿ ತಂದಿದೆ ಎಂದು ಹೇಳಿದರು. ನನಗೆ ದೊರೆತ ರೀತಿಯ ಬೆಂಬಲ ನನ್ನ ಸಹೋದ್ಯೋಗಿಗಳಿಗೆ ಸಿಗಲಿ ಎಂದು ಹಾರೈಸುತ್ತೇನೆ ಸರ್ಕಾರಿ ನೌಕರರಿಗೆ ಮೊದಲಿಗೆ ಸಹನೆ ತಾಳ್ಮೆ ಇರಬೇಕು ಅದು ಇದ್ದರೆ ಎಂತಹ ಕಠಿಣವಾದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಹುದು ಎಂದರು.
ಇದೇ ವೇಳೆ ಅಕ್ಷರ ದಾಸೋಹ ವಿಭಾಗದ ಪ್ರಧಾನ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಾರದ ಸಿಂಧ್ಯ ರವರನ್ನೂ ಕೂಡ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮದ್ದಾನಪ್ಪ. ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ. ಮಾದಪ್ಪ, ಸಂಘದ ಪದಾಧಿಕಾರಿಗಳಾದ ಕುಪ್ಯ ಪುಟ್ಟಸ್ವಾಮಿ, ಸುಬ್ರಮಣ್ಯ, ಶಿಕ್ಷಣ ಸಂಯೋಜಕ ಮಹದೇವಸ್ವಾಮಿ, ಬಸವರಾಜು, ಸಿದ್ದಪ್ಪ ಮುಂತಾದವರು ಹಾಜರಿದ್ದರು.

Related Keywords

India ,Triveni Sangam ,Office In Program ,Education Service ,Field Office ,Field Education ,இந்தியா ,திரிவேணி சங்கம் ,கல்வி சேவை ,புலம் அலுவலகம் ,புலம் கல்வி ,

© 2025 Vimarsana

comparemela.com © 2020. All Rights Reserved.