comparemela.com


Sanjevani
ಕನ್ನಡದಲ್ಲಿ ಇತ್ತೀಚಿಗೆ ವಿಭಿನ್ನ ಹೆಸರಿನ ಚಿತ್ರಗಳು ಸೆಟ್ಟೇರುತ್ತಿವೆ.ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಅದುವೇವ “ಓಮಿನಿ” ಸಿದ್ದು ಮೂಲಿಮನಿ ನಾಯಕನಾಗಿ ನಟಿಸಿರುವ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ.
ಮಂಜು ಹೆದ್ದೂರು ನಿರ್ದೇಶನದ ಚಿತ್ರ ತೆರೆಗೆ ಬರಲು ಸಜ್ಜಾಗಿದೆ ಪ್ರಮೋದ್ ಮರವಂತೆ ಬರೆದಿರುವ ” ಪ್ರಾಬ್ಲಂ ಲವ್ ದೊಡ್ಡ ಪ್ರಬ್ಲಾಂ” ಎಂಬ ಹಾಡಿನ ಚಿತ್ರೀಕರಣ ಇತ್ತೀಚೆಗೆ ನಡೆಯಿತು.
ಸಿದ್ದು ಮೂಲಿಮನಿ – ಪೂಜಾ ಜನಾರ್ದನ್ ಅಭಿನಯಿಸಿರುವ ಗೀತಾ ಸೈ ನೃತ್ಯ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಸುಶ್ರಾವ್ಯವಾಗಿ ಈ ಹಾಡನ್ನು ಹಾಡಿದ್ದಾರೆ.ಈ ಹಾಡಿನ ಚಿತ್ರೀಕರಣದೊಂದಿಗೆ “ಓಮಿನಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಚಿತ್ರದ ಎಲ್ಲಾ ಚಟುವಟಿಕೆಗಳು ಬಹುತೇಕ ಪೂರ್ಣವಾಗಿದ್ದು, ಸದ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ. ನಿರ್ದೇಶಕ ಮಂಜು ಹೆದ್ದೂರು, ಚಿತ್ರದಲ್ಲಿ ವ್ಯಾನ್ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ “ಓಮಿನಿ” ಎಂದು ಹೆಸರಿಡಲಾಗಿದೆ ಎನ್ನುವ ನಿರ್ದೇಶಕರು, ಲ್ಯಾಟಿನ್ ಭಾಷೆಯಲ್ಲಿ “ಓಮಿನಿ” ಅಂದರೆ ಎಲ್ಲವನ್ನೂ ಒಳಗೊಂಡಿದೆ ಎಂಬ ಅರ್ಥ ಬರುತ್ತದೆ ಹಾಗಾಗಿ ಎರಡನ್ನ ಗಮನದಲ್ಲಿಟ್ಟುಕೊಂಡು ನಮ್ಮ ಚಿತ್ರಕ್ಕೆ ಈ ಅನ್ವರ್ಥ ಎಂದು ತಿಳಿಸಿದ್ದಾರೆ.
ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ ಎಂದು ವಿವರ ನೀಡಿದರು. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ.
ಡಾ.ವಿ.ನಾಗೇಂದ್ರ ಪ್ರಸಾದ್, ಬಹದ್ದೂರ್ ಚೇತನ್ ಕುಮಾರ್, ಪ್ರಮೋದ್ ಮರವಂತೆ ಹಾಗೂ ಮಂಜು ಹೆದ್ದೂರು ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸಂಚಿತ್ ಹಗ್ಡೆ, ಶಶಾಂಕ್ ಶೇಷಗಿರಿ, ಸುಪ್ರಿಯ ರಾಮ್, ಸಿದ್ದಾರ್ಥ ಬೆಳ್ಮಣ್ ಗೀತೆಗಳನ್ನು ಹಾಡಿದ್ದಾರೆ.
ಎಂ.ಬಿ.ಅಳಿಕಟ್ಟಿ ಛಾಯಾಗ್ರಹಣ, ವಿನಯ್ ಕುಮಾರ್ ಕೂರ್ಗ್ ಸಂಕಲನ ಹಾಗೂ ಮದನ್ ಹರಿಣಿ, ಗೀತಾ ಸೈ, ರಾಜಕಿಶೋರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸಿದ್ದು ಮೂಲಿಮನಿ, ಪೂಜಾ ಜನಾರ್ದನ್, ಅಶ್ವಿನ್ ಚಂದ್ರಶೇಖರ್, ಭರತ್ ಬೋಪ್ಪಣ್ಣ, ಆಕಾಂಕ್ಷ ಪಟಮಕ್ಕಿ, ಮಂಜು ಹೆದ್ದೂರು, ಮೋಹನ್ ಜುನೇಜ,
ಪ್ರಕಾಶ್ ತುಮ್ಮಿನಾಡು, ನಾಗೇಶ್ ಮಯ್ಯ, ಯಮುನಾ ಶ್ರೀನಿಧಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related Keywords

India ,Bharat ,Vinay Kumar ,Yamuna Shrinidhi ,Arjun Ramu ,Ashwin Chandrasekhar ,Nagendra Prasad ,Chetan Kumar , ,Sunday Pramod ,Problem Love ,Shashank Places ,Audio Release ,Bahadur Chetan Kumar ,இந்தியா ,பாரத் ,வினய் குமார் ,அர்ஜுன் ராமு ,நாகேந்திரா பிரசாத் ,சேதன் குமார் ,ப்ராப்லம் காதல் ,ஆடியோ வெளியீடு ,

© 2025 Vimarsana

comparemela.com © 2020. All Rights Reserved.