comparemela.com


Sanjevani
ನಂಜುಂಡಿ ಕಲ್ಯಾಣ ” ಚಿತ್ರದ ಬಳಿಕ ನಟ ತನುಷ್ ಶಿವಣ್ಣ ನಟ್ವರ್ ಲಾಲ್ ಆಗಿದ್ದಾರೆ. ಇದಕ್ಕಾಗಿ ಐದು ವಿಭಿನ್ನ ಅವತಾರ ತಾಳಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.ಈ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡುತ್ತಿದೆ.
ವಿ.ಲವ ನಿರ್ದೇಶಿಸುತ್ತಿರುವ ಚಿತ್ರಕ್ಕೆ ತನುಷ್ ಬಂಡವಾಳ ಹಾಕಿದ್ದಾರೆ. ನಟ್ವರ್ ಲಾಲ್ ಚಿತ್ರದಲ್ಲಿ ಮುಗ್ಧ ಹುಡುಗನೊಬ್ಬ ಹೇಗೆ ಮಹಾನ್ ಮೋಸಗಾರ ನಾಗುತ್ತಾನೆ ಎನ್ನುವುದನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.
ಮದುಕು, ಕ್ಲೀನರ್, ಸ್ಟೈಲಿಶ್, ಹಳ್ಳಿ ಯವಕ ಹೀಗೆ ಪ್ರತಿಬಾರಿಯೂ ಮೋಸ ಮಾಡುವಾಗ ಒಂದೊಂದು ವೇಷ ತೊಟ್ಟು ಜನರಿಗೆ ಆರಿಸುತ್ತಾನೆ ಈಗ ಚಿತ್ರದಲ್ಲಿ ಬರಲಿದೆ . ಚಿತ್ರಕ್ಕಾಗಿ ದೇಹ ತೂಕ ಹೆಚ್ಚಿಸಿಕೊಂಡಿರುವುದಾಗಿ ತನುಷ್ ಶಿವಣ್ಣ ಹೇಳಿದ್ದಾರೆ.ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಾಯಕಿಯಾಗಿ ಸೋನಾಲ್ ಮಾಂಟೆರೊ ಅಭಿನಯಿಸುತ್ತಿದ್ದಾರೆ.
ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, ಕಾಕ್ರೋಜ್ ಸುಧೀ, ಕಾಮಿಡಿ ಕಿಲಾಡಿಗಳು ನಯನ, ರಾಜೇಂದ್ರ ಕಾರಂತ್, ರಘು ರಮಣಕೊಪ್ಪ, ಸುಂದರರಾಜ್, ಕಾಂತರಾಜ್ ಕಡ್ಡಿಪಡಿ, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ, ನಾಗರಾಜ್ ಅರಸು, ಭೀಷ್ಮ ರಾಮಯ್ಯ, ಪ್ರಶಾಂತ್ ಸಿದ್ದಿ ಸೇರಿ ಬಹುದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಧರ್ಮ ವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.

Related Keywords

Bangalore ,Karnataka ,India ,Chand Lal ,Yash Shetty ,Rajendra Karanth ,William David ,Padma Vasanthi ,Bhishma Ramaiah ,Giri Karnataka , ,First Look Anand Audio ,Director Karnataka ,Action Thrillers ,Town King ,பெங்களூர் ,கர்நாடகா ,இந்தியா ,மந்திரம் லால் ,யஷ் ஷெட்டி ,வில்லியம் டேவிட் ,நடவடிக்கை த்ரில்லர்கள் ,நகரம் கிங் ,

© 2025 Vimarsana

comparemela.com © 2020. All Rights Reserved.