comparemela.com


Sanjevani
ಧಾರವಾಡ, ಆ.4: ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ನರ್ಮ್) ಅಭಿಯಾನದಡಿ ಆರಂಭಿಸಿರುವ ಸಂಜೀವಿನಿ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಜೀವಿನಿಯಾಗಿದ್ದು, ಒಕ್ಕೂಟದ ಮಹಿಳಾ ಸದಸ್ಯರು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಭಿಯಾಗಿ ಅಭಿವೃದ್ಧಿ ಸಾಧಿಸಿಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ. ಸುಶೀಲಾ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ನರ್ಮ್) ಅಭಿಯಾನದಡಿ ಸಮುದಾಯ ಬಂಡವಾಳ ನಿಧಿಯ ಚೆಕ್‍ಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿವೃದ್ಧಿಯಲ್ಲಿ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳಲ್ಲಿ ಅವಕಾಶ ಕಲ್ಪಿಸಿದೆ. ಆದ್ದರಿಂದ ಮಹಿಳೆಯರು ತಮ್ಮ ಒಕ್ಕೂಟದ ಮೂಲಕ ಸಮುದಾಯ ಬಂಡವಾಳ ನಿಧಿಯನ್ನು ಅರ್ಹ ಮತ್ತು ಅವಶ್ಯವಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲವನ್ನು ವಿತರಿಸುವ ಮೂಲಕ ಒಂದು ಬ್ಯಾಂಕ್ ರೀತಿಯಲ್ಲಿ ಶಿಸ್ತುಬದ್ಧವಾಗಿ ವ್ಯವಹರಿಸಬೇಕು. ಮತ್ತು ಈ ಮೂಲಕ ಮಹಿಳೆಯರು ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ 144 ಗ್ರಾಮಪಂಚಾಯತ್‍ಗಳ ಪೈಕಿ 130 ಗ್ರಾಮಪಂಚಾಯತ್‍ಗಳಲ್ಲಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳು ರಚನೆಯಾಗಿವೆ. ಇವುಗಳ ಪೈಕಿ 79 ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ಸಮುದಾಯ ಬಂಡವಾಳ ನಿಧಿ ಅನುದಾನ 1021.75 ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ 79 ಗ್ರಾಮಪಂಚಾಯತಿ ಮಟ್ಟದ ಒಕ್ಕೂಟಗಳ ಪೈಕಿ ಹತ್ತು ಗ್ರಾಮಪಂಚಾಯತ್ ಒಕ್ಕೂಟಗಳಿಗೆ ಮಾತ್ರ ಶೇ.25 ರಷ್ಟು ಹಾಗೂ ಉಳಿದ ಒಕ್ಕೂಟಗಳಿಗೆ ಶೇ.50 ರಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ. ಇವುಗಳಲ್ಲಿನ 33 ಗ್ರಾಮಪಂಚಾಯತ್ ಒಕ್ಕೂಟಗಳಿಗೆ ಶೇ.25 ರಷ್ಟು 2ನೇ ಕಂತಿನ ಅನುದಾನ 256 ಲಕ್ಷ ರೂ.ಗಳ ಡಿ.ಡಿ.ಯನ್ನು ಇಂದು ವಿತರಿಸಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಂಡು ಒಕ್ಕೂಟಗಳು ತಾವೇ ಬ್ಯಾಂಕುಗಳಾಗಿ ತಮ್ಮ ಮಹಿಳಾ ಸ್ವಸಹಾಯ ಸಂಘಗಳಿಗೆ ಕನಿಷ್ಠ ದರದ ಬಡ್ಡಿಯಲ್ಲಿ ಸಾಲದ ನೆರವು ನೀಡಬೇಕೆಂದು ಡಾ.ಬಿ. ಸುಶೀಲಾ ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರೇಖಾ ಡೊಳ್ಳಿನ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ ಇದ್ದರು. ಕುಂದಗೋಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿಯವರ, ಅಳ್ನಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ತಳಕಲ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತ ಮಟ್ಟದ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ ಕಂಠಿ ಕಾರ್ಯಕ್ರಮ ನಿರೂಪಿಸಿದರು. ಗಳಗಿ-ಹುಲಕೊಪ್ಪದ ನೀಲಾಂಬಿಕಾ ಹಿರೇಮಠ ಪ್ರಾರ್ಥಿಸಿದರು. ಕುಮಾರಿ ಹಂಸಾವತಿ ವಂದಿಸಿದರು.

Related Keywords

Dharwad ,Karnataka ,India , ,Union Women ,Her Union ,Women Union ,Development District ,Her Women ,District Rekha ,Main Magpie ,தர்வாத் ,கர்நாடகா ,இந்தியா ,தொழிற்சங்கம் பெண்கள் ,அவள் தொழிற்சங்கம் ,பெண்கள் தொழிற்சங்கம் ,வளர்ச்சி மாவட்டம் ,அவள் பெண்கள் ,

© 2025 Vimarsana

comparemela.com © 2020. All Rights Reserved.