comparemela.com


Sanjevani
ಅಂಗನವಾಡಿ ಕಾರ್ಯಕರ್ತೆಯಿಂದ ಭೂ ಕಬಳಿಕೆ; ತೆರವಿಗೆ ಮುಂದಾದ ಗ್ರಾಮಾಡಳಿತ
ಅಂಗನವಾಡಿ ಕಾರ್ಯಕರ್ತೆಯಿಂದ ಭೂ ಕಬಳಿಕೆ; ತೆರವಿಗೆ ಮುಂದಾದ ಗ್ರಾಮಾಡಳಿತ
ಹೊಸನಗರ.ಆ.೪; ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬಳ್ಳಿ ಸ. ನಂ. 11 ರಲ್ಲಿ ಕಸ ವಿಲೆವಾರಿ ಘಟಕ ನಿರ್ಮಾಣ ಹಾಗೂ ನಿವೇಶನ ರಹಿತರಿಗಾಗಿ ಕಾಯ್ದಿರಿಸಲಾದ ಕಂದಾಯ ಭೂಮಿಯನ್ನು ಜಂಬಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ ಎಂಬುವವರು ರಾತ್ರೋರಾತ್ರಿ ಅಡಿಕೆ ಗಿಡ ನೆಟ್ಟು ಭೂ ಕಬಳಿಕೆ ಮುಂದಾಗಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕೆಂದು ಪ್ರತಿಭಟನೆ ನಡೆಸಿ ಗ್ರಾಮಸ್ಥರು ಗ್ರಾಮಾಡಳಿತಕ್ಕೆ  ಮನವಿ ಸಲ್ಲಿಸಿದರು. ಈ ಸಂಬಂಧ ಪೊಲೀಸ್ ಇಲಾಖೆ ರಕ್ಷಣೆಯಲ್ಲಿ ಗ್ರಾಮಾಡಳಿತ ಅಕ್ರಮ ಜಾಗ ತೆರವು ಕಾರ್ಯಾಚರಣೆಗೆ ಮುಂದಾದಾಗ ಜಂಬಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗಾಯಿತ್ರಿ ಬಾಲರಾಜ್ ಮತ್ತು ಯೋಧ ಮಲ್ಲಿಕಾರ್ಜುನ ಮಾರಕಾಸ್ತçಗಳೊಂದಿಗೆ ಏಕಾಏಕಿ ನುಗ್ಗಿ ಹಲ್ಲೆಗೆ ಮುಂದಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅಗೌರವ ಎಸಗಿದ್ದಾರೆಂದು ಗ್ರಾಮ ಪಂಚಾಯ್ತಿ ಅಡಳಿತ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪ್ರತಿಭಟನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ವನಿತಾ ಗಂಗಾಧರ, ಉಪಾಧ್ಯಕ್ಷೆ ಲೀಲಾವತಿ ಪುಂಡಲೀಕ ಸದಸ್ಯರಾಸ ಚಂದ್ರಶೇಖರ ಮಳವಳ್ಳಿ, ಪ್ರವೀಣ್, ವಿಶ್ವಕುಮಾರ, ನಾಗರತ್ನ ಸಂತೋಷ, ನಾಗರತ್ನ ಶ್ಯಾಮ್, ನಾಶೀಮಾ, ಸುಮಿತ್ರಮ್ಮ, ಲಿಂಗರಾಜ ವಡಾಹೊಸಳ್ಳಿ, ಚೂಡಾಮಣಿ, ಶೇಖರಪ್ಪ, ಷಣ್ಮುಖ, ವಿನಂತಿ, ಕವಿತಾಭೀಮರಾಜ್, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿವರ್ಗ ಹಾಗೂ ಗ್ರಾಮಸ್ಥರಾದ ಜಂಬಳ್ಳಿ ಗಿರೀಶ್, ಎಪಿಎಂಸಿ ನಿರ್ದೇಶಕ ಗುಂಡಣ್ಣ ಯಾನೆ ಲೇಖಪ್ಪ, ಸತೀಶ್ ಭಟ್,ಆದರ್ಶ ಕಲ್ಲೂರು, ಗಂಗಾಧರ ಕಲ್ಲೂರು, ಮಂಜಪ್ಪ, ಪ್ರವೀಣ್ ಮೊದಲಾದವರು ಇದ್ದರು. 

Related Keywords

Karnataka ,India ,Pundalik Chandra ,Satish Bhatt ,Law Center ,District Village ,Site Revenue Land Village ,Vice President Pundalik Chandra ,கர்நாடகா ,இந்தியா ,சத்தீஷ் பட் ,மாவட்டம் கிராமம் ,

© 2025 Vimarsana

comparemela.com © 2020. All Rights Reserved.