ಕೃಷ್ಣಾ ನದ&#x

ಕೃಷ್ಣಾ ನದಿ ತಡೆಗೋಡೆ ನಿರ್ಮಾಣ ದುರಸ್ತಿಗೆ ಜಿಂದಪ್ಪ ಆಗ್ರಹ


Sanjevani
ಕೃಷ್ಣಾ ನದಿ ತಡೆಗೋಡೆ ನಿರ್ಮಾಣ ದುರಸ್ತಿಗೆ ಜಿಂದಪ್ಪ ಆಗ್ರಹ
ಕೃಷ್ಣಾ ನದಿ ತಡೆಗೋಡೆ ನಿರ್ಮಾಣ ದುರಸ್ತಿಗೆ ಜಿಂದಪ್ಪ ಆಗ್ರಹ
ರಾಯಚೂರು, ಜೂ.೨೭- ಡೊಂಗರಾಂಪೂರು ಪಕ್ಕದಲ್ಲಿ ಕೃಷ್ಣಾ ನದಿಗೆ ತಡೆಗೋಡೆ ನಿರ್ಮಾಣ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ಕೈಗೆತ್ತಿಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಜಿಂದಪ್ಪ ವಡ್ಲೂರ್ ಒತ್ತಾಯಿಸಿದರು.
ಡೊಂಗರಾಂಪೂರು,ನಾಗರಿಸಿಕ್ಯಾಂಪ್,ಯರಗುಂಟ,ಅಪ್ಪನದೊಡ್ಡಿ,ಕಲವಲದೊಡ್ಡಿ, ಸುತ್ತ ಮುತ್ತಲ ಗ್ರಾಮಗಳಿಗೆ ಈ ಕೃಷ್ಣಾ ನದಿಗೆ ಅಡ್ಡಲಾಗಿ ೧೯೭೫ ಮತ್ತು ೭೬ ರಲ್ಲಿ ನಿರ್ಮಾಣವಾದ ತಡೆಗೋಡೆಯಿಂದ ೩ ಸಾವಿರ ಎಕರೆ ಭೂಮಿಗೆ ನೀರು ಸಿಗುತಿತ್ತು ಆದರೆ ಈ ತಡೆಗೋಡೆ ಕುಸಿದ ಪರಿಣಾಮ ನೀರು ನಿಲ್ಲದೆ ಪಕ್ಕದ ಆಂದ್ರ ಮತ್ತು ತೆಲಂಗಾಣ ರಾಜ್ಯಕ್ಕೆ ನೀರು ಸಾಗುತ್ತಿದೆ, ತಡೆಗೋಡೆ ಸಂಪೂರ್ಣವಾಗಿ ಹಾಳಾಗಿದ್ದು ನೀರು ನಿಲ್ಲುತ್ತಿಲ್ಲ, ಬೇಸಿಗೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಜನರು ಬೇಸಿಗೆಯಲ್ಲಿ ಭತ್ತವನ್ನು ನಾಟಿ ಮಾಡಿ ನೀರು ಸಿಗದೆ ಸಾಕಷ್ಟು ನಷ್ಟವನ್ನು ಅನುಭವಿಸುತಿದ್ದಾರೆ,ಒಂದು ಕಡೆ ಮಳೆಗಾಲದಲ್ಲಿ ಕೃಷ್ಣಾ ನದಿಯ ದಡದಲ್ಲಿನ ಜನರು ನರೆಹಾವಳಿಗೆ ತುತ್ತಾಗುತ್ತಿದ್ದರೆ. ಮತ್ತೊಂದು ಕಡೆ ಬೇಸಿಗೆಯಲ್ಲಿ ನೀರು ಸಿಗದೆ ಪರಿತಪಿಸುವ ಪರಿಸ್ಥಿತಿ ಉದ್ಭವವಾಗಿದೆ ಇದರಿಂದಾಗಿ ಸಾಕಷ್ಟು ಸಾಲದ ಸುಳಿಗೆ ರೈತರು ತುತ್ತಾಗುತಿದ್ದಾರೆ,
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ತಡೆಗೋಡೆ ೧೯೭೫ ರಲ್ಲಿ ನಿರ್ಮಾಣವಾದಾಗ ಸಾಕಷ್ಟು ನೀರು ನಿಲ್ಲುತಿತ್ತು, ಮತ್ತು ಇಲ್ಲಿಂದಲೇ ಸುತ್ತಲೂ ಹತ್ತು ಹಳ್ಳಿಗಳಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಪಂಪ್ ಹೌಸ್ ನಿರ್ಮಾಣವನ್ನು ಸರ್ಕಾರ ಕೈಗೊಂಡಿತ್ತು,ಆದರೆ ಬೇಸಿಗೆಯಲ್ಲಿ ಕುಡಿಯಲು ಸಹ ನೀರು ಸಿಗದೆ ಜನರು ಪರಿತಪಿಸುವ ಬವಣೆ ತಪ್ಪಿಲ್ಲವಾಗಿದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಗಮನದಲ್ಲಿಟ್ಟು ಕೊಂಡು ಸರ್ಕಾರ ೧೫೦೦ ಕೋಟಿ ರೂಪಾಯಿಗಳು ಅಭಿವೃದ್ಧಿ ಕೆಲಸಕ್ಕಾಗಿ ರಾಜ್ಯಪಾಲರು ಅನುಮೋದನೆಯನ್ನು ಕೊಟ್ಟಿದ್ದಾರೆ ಈ ಯೋಜನೆಯ ಅಡಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಬರುವ ಡೊಂಗರಾಂಪೂರು ಪಕ್ಕದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ತಡೆಗೋಡೆಯ ದುರಸ್ತಿ ಕಾರ್ಯವನ್ನು ಮುಂದಿನ ಬೇಸಿಗೆಯಲ್ಲಿ ಕೈಗೆತ್ತಿಕೊಳ್ಳಬೇಕಿದೆ, ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಈ ತಡೆಗೋಡೆಗೆ ಕ್ರಿಯಾ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು ಕೃಷಿಗೆ ಸಂಭಂದಿಸಿದ ಈ ಯೋಜನೆಯಿಂದ ಸಾಕಷ್ಟು ರೈತ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಾರೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದರು.

Related Keywords

Raichur , Karnataka , India , Telangana , Andhra Pradesh , , Rs Development , Green Army , Green Army Monday , Krishna River , ரைச்சூர் , கர்நாடகா , இந்தியா , தெலுங்கானா , ஆந்திரா பிரதேஷ் , பச்சை இராணுவம் , கிருஷ்ணா நதி ,

© 2025 Vimarsana