comparemela.com


Sanjevani
ದೇವದುರ್ಗ.ಜು.೮- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಕಡಿಮೆ ತೂಕ, ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿದ್ದ ೧೮ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್‌ನ ಎನ್‌ಆರ್‌ಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಯಿತು.
ಮಕ್ಕಳ ವೈದ್ಯರಾದ ಶಿವಕುಮಾರ ದೇಸಾಯಿ ಮಾತನಾಡಿ, ಪ್ರತಿತಿಂಗಳು ಕಡಿಮೆ ತೂಕ, ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಎರಡೂ ಸಮಸ್ಯೆ ನಿವಾರಿಸಲು ತಾಯಂದಿರ ಸಹಕಾರ ಅಗತ್ಯವಿದೆ. ಪೌಷ್ಟಿಕ ಆಹಾರ ಸೇವನೆ, ಸ್ವಚ್ಛತೆ ಹಾಗೂ ವೈದ್ಯರ ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸುವುದರಿಂದ ಈ ರೋಗದಿಂದ ಮಕ್ಕಳು ಗುಣಮುಖರಾಗಲಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ತಾಯಂದಿರು ಶುದ್ಧ ಕುಡಿವ ನೀರು, ಪೌಷ್ಟಿಕ ಆಹಾರ, ಸ್ವಚ್ಛತೆ, ಮಕ್ಕಳ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಶಿಬಿರದಲ್ಲಿ ೯೮ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಸಿಡಿಪಿಒ ವೆಂಕಟಪ್ಪ, ಎಸಿಡಿಪಿಒ ನಾಗರತ್ನ, ವೀರಮ್ಮ ಅಗಳಕೇರಾ, ಶೃತಿಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ರಾಮಣ್ಣ ಎನ್.ಗಣೇಕಲ್, ಮೇಲ್ವಿಚಾರಕಿ ಕಮಲಮ್ಮ, ಆಶಾ, ಅಂಗನವಾಡಿ ಕಾರ್ಯಕರ್ತೆಯರಾದ ಶಿವಲಕ್ಷ್ಮಿ, ಚನ್ನಮ್ಮ, ಲತಾ ಗಂಗಾವತಿ, ಮಾನಮ್ಮ, ಮಂಗಳಾ, ಕಸ್ತೂರಿಬಾಯಿ, ಶಿವಪ್ಪ ಇತರರಿದ್ದರು.

Related Keywords

Lata Ganga ,Development Department ,Shiv Desai ,வளர்ச்சி துறை ,ஷிவ் தேசாய் ,

© 2024 Vimarsana

comparemela.com © 2020. All Rights Reserved.